Arasinamakki Gram Panchayat President Gayatri inaugurated the camp.

Kokkada: Under the leadership of Kanyadi Seva Bharati, beneath the Sabalini project, in collaboration with Arasinamakki Gram Panchayat and Hatyadka Primary Agricultural Credit Cooperative Society, the inauguration of the 31st free tailoring training camp for women was held on Sunday at the Hatyadka C.A. Bank auditorium.

Arasinamakki Gram Panchayat President Gayatri inaugurated the event. Swarnagowri, President of Seva Bharati Kanyadi and CEO of Belthangady Taluk Women's Cooperative Society, conveyed her good wishes.

Arasinamakki Gram Panchayat Vice President Sudhir Kumar, Kanyadi Sri Durga Matrumandali President Shanta P. Shetty, Arikegudde Sri Vanadurga Temple Women's Secretary Neetha Rajesh Acharya, Senior Tailoring Trainers Shakuntala M. Acharya and Reshma Jayaprasad Shetty were present. A total of 31 women trainees participated in the camp. Dhanya welcomed the gathering. Suma compered the program. Bharati delivered the vote of thanks.

Kannada :

Title :
ಟೈಲರಿಂಗ್ ತರಬೇತಿ ಉಚಿತ ಶಿಬಿರ ಉದ್ಘಾಟನೆ

ಅರಸಿನಮಕ್ಕಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಾಯತ್ರಿ ಶಿಬಿರಕ್ಕೆ ಚಾಲನೆ ನೀಡಿದರು.

ಕೊಕ್ಕಡ: ಕನ್ಯಾಡಿ ಸೇವಾ ಭಾರತಿ ನೇತೃತ್ವದಲ್ಲಿ ಸಬಲಿನಿ ಯೋಜನೆಯಡಿ, ಅರಸಿನಮಕ್ಕಿ ಗ್ರಾಮ ಪಂಚಾಯಿತಿ ಮತ್ತು ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಸಹಭಾಗಿತ್ವದಲ್ಲಿ ಮಹಿಳೆಯರಿಗಾಗಿ 31ನೇ ಟೈಲರಿಂಗ್ ತರಬೇತಿ ಉಚಿತ ಶಿಬಿರದ ಉದ್ಘಾಟನೆ ಭಾನುವಾರ ಹತ್ಯಡ್ಕ ಸಿ.ಎ. ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು.

ಅರಸಿನಮಕ್ಕಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಾಯತ್ರಿ ಚಾಲನೆ ನೀಡಿದರು. ಸೇವಾಭಾರತಿ ಕನ್ಯಾಡಿಯ ಅಧ್ಯಕ್ಷೆ ಹಾಗೂ ಬೆಳ್ತಂಗಡಿ ತಾಲೂಕು ಮಹಿಳಾ ಸಹಕಾರಿ ಸಂಘದ ಸಿಇಒ ಸ್ವರ್ಣಗೌರಿ ಶುಭ ಹಾರೈಸಿದರು.

ಅರಸಿನಮಕ್ಕಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುಧೀರ್ ಕುಮಾರ್, ಕನ್ಯಾಡಿ ಶ್ರೀ ದುರ್ಗಾ ಮಾತೃಮಂಡಳಿ ಅಧ್ಯಕ್ಷೆ ಶಾಂತ ಪಿ. ಶೆಟ್ಟಿ, ಅರಿಕೆಗುಡ್ಡೆ ಶ್ರೀ ವನದುರ್ಗಾ ದೇವಸ್ಥಾನದ ಮಹಿಳಾ ಕಾರ್ಯದರ್ಶಿ ನೀತಾ ರಾಜೇಶ್ ಆಚಾರ್ಯ, ಹಿರಿಯ ಟೈಲರಿಂಗ್ ತರಬೇತುದಾರರಾದ ಶಕುಂತಲಾ ಎಂ. ಆಚಾರ್ಯ ಮತ್ತು ರೇಷ್ಮಾ ಜಯಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು. ಶಿಬಿರದಲ್ಲಿ ಒಟ್ಟು 31 ಮಹಿಳಾ ಶಿಬಿರಾರ್ಥಿಗಳು ಭಾಗವಹಿಸಿದ್ದರು. ಧನ್ಯ ಸ್ವಾಗತಿಸಿದರು. ಸುಮಾ ನಿರೂಪಿಸಿದರು. ಭಾರತಿ ವಂದಿಸಿದರು.