ಕನ್ಯಾಡಿ ಸೇವಾಭಾರತಿಯಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ಯು.ಟಿ. ಖಾದರ್ ರವರ ಭೇಟಿ.

ಮಂಗಳೂರು (ಜೂ. 23): ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ಯು.ಟಿ. ಖಾದರ್ ರವರನ್ನು ಜೂನ್ 23 ರಂದು ಸೇವಾಭಾರತಿ ತಂಡದಿಂದ ಭೇಟಿ ಮಾಡಲಾಯಿತು.

ಈ ಸಂದರ್ಭದಲ್ಲಿ ಸೇವಾಭಾರತಿಯ ಹಿರಿಯ ಪ್ರಬಂಧಕರಾದ ಶ್ರೀ ಚರಣ್ ಕುಮಾರ್ ಎಂ ಅವರು, 2011ರ ಸರ್ಕಾರದ ಆದೇಶವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ, ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ (Persons with Spinal Cord Injury - PwSCI) ಅಗತ್ಯವಿರುವ ವೈದ್ಯಕೀಯ ಸ್ವಯಂ ಆರೈಕೆ (Medical Self-Care) ಕಿಟ್‌ಗಳು ಹಾಗೂ ಸಹಾಯಕ ಸಾಧನಗಳನ್ನು ಸರ್ಕಾರದಿಂದ ಒದಗಿಸಬೇಕೆಂದು ಮನವಿ ಮಾಡಿದರು.

ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರ ದೈನಂದಿನ ಆರೈಕೆ, ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಹಾಗೂ ಸ್ವಾವಲಂಬಿ ಜೀವನ ನಡೆಸಲು ಈ ಸೌಲಭ್ಯಗಳು ಅತ್ಯಂತ ಅವಶ್ಯಕವಾಗಿವೆ ಎಂದು ಸಚಿವರ ಗಮನಕ್ಕೆ ತಂದರು.

ಮನವಿಯನ್ನು ಸ್ವೀಕರಿಸಿದ ಮಾನ್ಯ ಸಚಿವರು ವಿಷಯವನ್ನು ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.